
ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತುಮಕೂರಿನ ವಿದ್ಯಾರ್ಥಿಗಳು 1941ರಲ್ಲಿ ಸ್ಥಾಪಿಸಿಕೊಂಡಿದ್ದ ಸಂಘಟನೆ - ಸನ್ಮಿತ್ರ ಸಂಘ. 16ನೆಯ ಡಿಸೆಂಬರ್ 1945, ಭಾನುವಾರ ಸಂಜೆ ತುಮಕೂರಿನ ಕೃಷ್ಣರಾಜ ಪುರಭವನದಲ್ಲಿ ನಡೆದ ಸನ್ಮಿತ್ರ ಸಂಘದ ಸಭೆಯಲ್ಲಿ ಗೊರೂರು ಅನುಮೋದಿಸಿದ ಗೊತ್ತುವಳಿ ಇಂತಿದೆ:
ಕನ್ನಡ ನಾಡಿನ ಏಕೀಕರಣಕ್ಕೆ ಸೇರಿರುವ ಈ ಸಭೆಯು, ಸಮಸ್ತ ಕನ್ನಡಿಗರೂ ಕರ್ನಾಟಕ ಏಕೀಕರಣವು ಕಾರ್ಯಕಾರಿಯಾಗಿ ರೂಪುಗೊಳ್ಳುವಂತೆ ಪೂರ್ಣ ಪ್ರಯತ್ನ ಮಾಡಬೇಕೆಂದು ಕನ್ನಡಿಗರನ್ನು ಬೇಡುತ್ತದೆ. ಕಾಂಗ್ರೆಸ್ಸಿನಿಂದ ಅಂಗೀಕೃತವಾದ ಈ ತತ್ತ್ವವನ್ನು ಕೂಡಲೇ ಕಾರ್ಯಕಾರಿಯಾಗಿ ಮಾಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸುತ್ತದೆ.
[ಆಕರ: `ಸನ್ಮಿತ್ರ ಸಂಘ'ದ ಕಾರ್ಯಕರ್ತರಾಗಿದ್ದ ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿರುವ ದಾಖಲೆ].
ಕೃತಿಗಳು
ಕಾದಂಬರಿಗಳು
- ಹೇಮಾವತಿ
- ಪುನರ್ಜನ್ಮ
- ಮೆರವಣಿಗೆ
- ಊರ್ವಶಿ
- ಪ್ರಬಂಧ/ಕಥಾ ಸಂಕಲನಗಳು
- ಹಳ್ಳಿಯ ಚಿತ್ರಗಳು
- ಗರುಡಗಂಬದ ದಾಸಯ್ಯ
- ನಮ್ಮ ಊರಿನ ರಸಿಕರು
- ಶಿವರಾತ್ರಿ
- ಕಮ್ಮಾರ ವೀರಭದ್ರಾಚಾರಿ
- ಬೆಸ್ತರ ಕರಿಯ
- ಬೆಟ್ಟದ ಮನೆಯಲ್ಲಿ ಮತ್ತು ಇತರ ಕಥೆಗಳು
- ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
- ಗೋಪುರದ ಬಾಗಿಲು
- ಉಸುಬು
- ವೈಯ್ಯಾರಿ
- ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಪ್ರವಾಸ ಕಥನ
- ಅಮೇರಿಕಾದಲ್ಲಿ ಗೊರೂರು
ಅನುವಾದಗಳು
- ಮಲೆನಾಡಿನವರು
- ಭಕ್ತಿಯೋಗ
- ಭಗವಾನ್ ಕೌಟಿಲ್ಯ
ಪ್ರಶಸ್ತಿ, ಗೌರವಗಳು
- ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು.
- ೧೯೮೦ರಲ್ಲಿ 'ಅಮೇರಿಕಾದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
- ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಅಧ್ಯಕ್ಷತೆ
- ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ದೇವರಾಜ ಬಹದ್ದೂರ್ ಪ್ರಶಸ್ತಿ
- ಅಭಿಮಾನಿಗಳು ಅರ್ಪಿಸಿದ ಗ್ರಂಧ ಗೊರೂರು ಗೌರವ ಗ್ರಂಥ ಸಂಸ್ಮರಣ ಗ್ರಂಧ ಹೇಮಾವತಿಯ ಚೇತನ.
ನಿಧನ
ಗೊರೂರರು ೧೯೯೧, ಸೆಪ್ಟೆಂಬರ್ ೮ರಂದು ನಿಧನರಾದರು
No comments:
Post a Comment