1 ಬೆಂಗಳೂರು (1915) ಎಚ್.ವಿ.ನಂಜುಂಡಯ್ಯ
2 ಬೆಂಗಳೂರು (1916) ಎಚ್.ವಿ.ನಂಜುಂಡಯ್ಯ

3 ಮೈಸೂರು (1917) ಎಚ್.ವಿ.ನಂಜುಂಡಯ್ಯ

4 ಧಾರವಾಡ (1918) ಆರ್. ನರಸಿಂಹಾಚಾರ್
5 ಹಾಸನ (1919) ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ (1920) ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು (1921) ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ(1922) ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ (1923)ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ (1924) ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ (1925) ಬೆನಗಲ್ ರಾಮರಾವ್
5 ಹಾಸನ (1919) ಕರ್ಪೂರ ಶ್ರೀನಿವಾಸರಾವ್
6 ಹೊಸಪೇಟೆ (1920) ರೊದ್ದ ಶ್ರೀನಿವಾಸರಾವ್
7 ಚಿಕ್ಕಮಗಳೂರು (1921) ಕೆ.ಪಿ.ಪಟ್ಟಣಶೆಟ್ಟಿ
8 ದಾವಣಗೆರೆ(1922) ಎಂ.ವೆಂಕಟಕೃಷ್ಣಯ್ಯ
9 ಬಿಜಾಪುರ (1923)ಸಿದ್ದಾಂತಿ ಶಿವಶಂಕರಶಾಸ್ತ್ರಿ
10 ಕೋಲಾರ (1924) ಹೊಸಕೋಟೆ ಕೃಷ್ಣಶಾಸ್ತ್ರೀ
11 ಬೆಳಗಾವಿ (1925) ಬೆನಗಲ್ ರಾಮರಾವ್
12 ಬಳ್ಳಾರಿ (1926) ಫ.ಗು.ಹಳಿಕಟ್ಟಿ13 ಮಂಗಳೂರು (1927) ಆರ್. ತಾತಾ
14 ಗುಲ್ಬರ್ಗಾ (1928) ಬಿ.ಎಂ.ಶ್ರೀಕಂಠಯ್ಯ
15 ಬೆಳಗಾವಿ (1929) ಮಾಸ್ತಿ ವೆಂಕಟೇಶ ಅಯ್ಯಂಗಾರ್
16 ಮೈಸೂರು (1930) ಆಲೂರು ವೆಂಕಟರಾವ್
17 ಕಾರವಾರ (1931) ಮಳಲಿ ತಿಮ್ಮಪ್ಪಯ್ಯ18 ಮಡಿಕೇರಿ (1932) ಡಿ.ವಿ.ಗುಂಡಪ್ಪ
19 ಹುಬ್ಬಳ್ಳಿ (1933) ವೈ.ನಾಗೇಶಶಾಸ್ತ್ರೀ20 ರಾಯಚೂರು (1934) ಪಂಜೆ ಮಂಗೇಶರಾಯ
21 ಮುಂಬಯಿ (1935) ಎನ್.ಎಸ್.ಸುಬ್ಬರಾವ್22 ಜಮಖಂಡಿ (1937) ಬೆಳ್ಳಾವೆ ವೆಂಕಟನಾರಣಪ್ಪ
23 ಬಳ್ಳಾರಿ (1938) ರಂ.ರಾ.ದಿವಾಕರ್
24 ಬೆಳಗಾವಿ (1939) ಮುದವೀಡು ಕೃಷ್ಣರಾವ್25 ಧಾರವಾಡ (1940) ವೈ.ಚಂದ್ರಶೇಖರ ಶಾಸ್ತ್ರೀ
26 ಹೈದ್ರಾಬಾದ್ (1941) ಎ.ಆರ್. ಕೃಷ್ಣಶಾಸ್ತ್ರೀ
26 ಹೈದ್ರಾಬಾದ್ (1941) ಎ.ಆರ್. ಕೃಷ್ಣಶಾಸ್ತ್ರೀ
27 ಶಿವಮೊಗ್ಗ (1943) ದ.ರಾ.ಬೇಂದ್ರೆ
28 ರಬಕವಿ (1944) ಎಸ್.ಎಸ್. ಬಸವನಾಳ29 ಮದರಾಸು (1945) ಟಿ.ಪಿ.ಕೈಲಾಸಂ
30 ಹರಪನಹಳ್ಳಿ(1947) ಸಿ.ಕೆ. ವೆಂಕಟರಾಮಯ್ಯ 31 ಕಾಸರಗೋಡು (1948) ತಿರುಮಲೆ ತಾತಾಚಾರ್ಯ ಶರ್ಮಾ
32 ಗುಲ್ಬರ್ಗಾ(1949) ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ (1950) ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ(1951) ಎಂ.ಗೋವಿಂದಪೈ
32 ಗುಲ್ಬರ್ಗಾ(1949) ಉತ್ತಂಗಿ ಚೆನ್ನಪ್ಪ
33 ಸೊಲ್ಲಾಪುರ (1950) ಎಂ.ಆರ್.ಶ್ರೀನಿವಾಸಮೂರ್ತಿ
34 ಮುಂಬಯಿ(1951) ಎಂ.ಗೋವಿಂದಪೈ
35 ಬೇಲೂರು(1952) ಎಸ್.ಸಿ.ನಂದಿಮಠ36 ಕುಮಟ (1954) ವಿ.ಸೀತಾರಾಮಯ್ಯ
37 ಮೈಸೂರು (1955) ಶಿವರಾಮಕಾರಂತ್
37 ಮೈಸೂರು (1955) ಶಿವರಾಮಕಾರಂತ್
38 ರಾಯಚೂರು (1955) ಆದ್ಯರಂಗಾಚಾರ್ಯ39 ಧಾರವಾಡ(1957) ಕೆ.ವಿ.ಪುಟ್ಟಪ್ಪ
40 ಬಳ್ಳಾರಿ(1958) ವಿ.ಕೃ.ಗೋಕಾಕ್
41 ಬೀದರ್ (1960) ಡಿ.ಎಲ್.ನರಸಿಂಹಾಚಾರ್
42 ಮಣಿಪಾಲ (1960) ಅ.ನ.ಕೃಷ್ಣರಾವ್
43 ಗದಗ (1961) ಕೆ.ಜಿ.ಕುಂದಣಗಾರ44 ಸಿದ್ಧಗಂಗಾ (1963) ರಂ.ಶ್ರೀ.ಮುಗಳಿ
45 ಕಾರವಾರ (1965) ಕಡೆಂಗೋಡ್ಲು ಶಂಕರಭಟ್ಟ
46 ಶ್ರವಣಬೆಳಗೊಳ(1967) ಅ.ನೇ.ಉಪಾಧ್ಯೆ
47 ಬೆಂಗಳೂರು (1970) ದೇ.ಜವರೇಗೌಡ
48 ಮಂಡ್ಯ (1974) ಜಯದೇವಿ ತಾಯಿ ಲಿಗಾಡೆ49 ಶಿವಮೊಗ್ಗ(1976) ಎಸ್.ವಿ.ರಂಗಣ್ಣ
50 ನವದೆಹಲಿ (1978) ಜಿ.ಪಿ.ರಾಜರತ್ನಂ

51 ಧರ್ಮಸ್ಥಳ (1979) ಎಂ.ಗೋಪಾಲಕೃಷ್ಣ ಅಡಿಗ
52 ಬೆಳಗಾವಿ (1980) ಬಸವರಾಜ ಕಟ್ಟಿಮನೀ
52 ಬೆಳಗಾವಿ (1980) ಬಸವರಾಜ ಕಟ್ಟಿಮನೀ

53 ಚಿಕ್ಕಮಗಳೂರು (1981) ಪು.ತಿ.ನರಸಿಂಹಾಚಾರ್

54 ಮಡಿಕೇರಿ (1981) ಶಂಬಾ ಜೋಶಿ
55 ಶಿರಸಿ (1982) ಗೊರೂರು ರಾಮಸ್ವಾಮಿ ಅಯ್ಯಂಗಾರ್
56 ಕೈವಾರ (1984) ಎ.ಎನ್. ಮೂರ್ತಿರಾವ್
57 ಬೀದರ್ (1985) ಹಾ.ಮಾ.ನಾಯಕ್
58 ಕಲಬುರ್ಗಿ (1987) ಸಿದ್ದಯ್ಯ ಪುರಾಣಿಕ್59 ಹುಬ್ಬಳ್ಳಿ (1990) ಆರ್.ಸಿ. ಹಿರೇಮಠ್
60 ಮೈಸೂರು (1990) ಕೆ.ಎಸ್. ನರಸಿಂಹಸ್ವಾಮಿ
60 ಮೈಸೂರು (1990) ಕೆ.ಎಸ್. ನರಸಿಂಹಸ್ವಾಮಿ
61 ದಾವಣಗೆರೆ (1992) ಜಿ.ಎಸ್. ಶಿವರುದ್ರಪ್ಪ62 ಕೊಪ್ಪಳ (1992) ಸಿಂಪಿ ಲಿಂಗಣ್ಣ
63 ಮಂಡ್ಯ (1994) ಚದುರಂಗ
63 ಮಂಡ್ಯ (1994) ಚದುರಂಗ

64 ಮುಧೋಳ (1995) ಎಚ್.ಎಲ್. ನಾಗೇಗೌಡ
65 ಹಾಸನ (1996) ಚನ್ನವೀರಕಣವಿ
66 ಮಂಗಳೂರು (1997) ಕಯ್ಯಾರ ಕಿಞಣ್ಣ ರೈ
67 ಕನಕಪುರ (1999) ಡಾ.ಎಸ್.ಎಲ್. ಬೈರಪ್ಪ
68 ಬಾಗಲಕೋಟೆ (2000) ಶಾಂತಾದೇವಿ ಮಾಳವಾಡ
69 ತುಮಕೂರು (2002) ಯು.ಆರ್. ಅನಂತಮೂರ್ತಿ
70 ಬೆಳಗಾವಿ (2003) ಡಾ.ಪಾಟೀಲ ಪುಟ್ಟಪ್ಪ
71 ಮೂಡಬಿದಿರೆ (2004) ಡಾ.ಕಮಲಾ ಹಂಪನಾ
72 ಬೀದರ್ (2006) ಶಾಂತರಸ ಹೆಂಬೇರಾಳು
73 ಶಿವಮೊಗ್ಗ (2006) ಪ್ರೊ.ಕೆ.ಎಸ್.ನಿಸಾರ್ ಅಹ್ಮದ್74 ಉಡುಪಿ (2007) ಎಲ್.ಎಸ್.ಶೇಷಗಿರಿ
75 ಚಿತ್ರದುರ್ಗ (2009) ಡಾ.ಎಲ್.ಬಸವರಾಜು
76 ಗದಗ (2010) ಡಾ.ಗೀತಾ ನಾಗಭೂಷಣ
ಪ್ರೊ|| ಜಿ ವೆಂಕಟಸುಬ್ಬಯ್ಯ ಕನ್ನಡದ ಏಳಿಗೆಗಾಗಿ ದುಡಿದವರು, ದುಡಿಯುತ್ತಿರುವವರು. ಬೆಂಗಳೂರಿನ ಇವರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಇವರ 'ಇಗೋ ಕನ್ನಡ' ಎಂಬ ಪ್ರಜಾವಾಣಿ ಅಂಕಣ ಸಮಸ್ತ ಕನ್ನಡಿಗರ ಬಾಯಿಮಾತಿನಲ್ಲಿರುವ ಅಂಕಣ. ೧೯೯೧ ರಿಂದ ಪ್ರಾರಂಭಿಸಿ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವರ್ಷ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿಯನ್ನಿತ್ತು ಗೌರವಿಸಿದೆ.
ಜೀವನ
೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು,ಮೈಸೂರಿನಲ್ಲಿಯೆ ಬೆಳೆದುಬಂದದ್ದು.ಇವರ ತಂದೆ, ಗಂಜಾಂ ತಿಮ್ಮಣ್ಣಯ್ಯನವರು ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದಕ್ಕಾಗಿ ಸುವರ್ಣ ಪದಕವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು.೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.
ಇಗೋ ಕನ್ನಡ
'ಇಗೋ ಕನ್ನಡ' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿದ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ ನಿಘಂಟನ್ನು ಹೊರತಂದದ್ದುಂಟು.ಪ್ರಶಸ್ತಗಳು
ಇವರು ಪಡೆದ ಪ್ರಶಸ್ತಿಗಳು- ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
- ನಾಡೋಜ ಪ್ರಶಸ್ತಿ (೨೦೦೫)
ಕೃಪೆ : nudinamana.blogspot.com



naama kannada samallana
ReplyDelete