welcome to lavalavika


I made this widget at MyFlashFetish.com.

Sunday, September 4, 2011

ಸರ್ವೆಪಲ್ಲಿ ರಾಧಾಕೃಷ್ಣನ್



'ಡಾ. ಸರ್ವೆಪಲ್ಲಿ ರಾಧಾಕೃಷ್ಣನ್'  ಜನನ : ೫,ಸೆಪ್ಟೆಂಬರ್. ಸರ್ವಪಲ್ಲಿ ಎನ್ನುವುದು ಮನೆತನದ ಹೆಸರಾದರೆ, 'ರಾಧಾಕೃಷ್ಣನ್' ಎನ್ನುವುದು ಅವರ ತಂದೆ-ತಾಯಿ ಇಟ್ಟ ಮುದ್ದಿನ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ಅವರು ಜಮೀನ್ದಾರರ ಬಳಿ ದಿನಗೂಲಿ ನೌಕರರಾಗಿ ಸೇವೆಗೈಯುತತ್ತಿದ್ದರು. ಕೇವಲ ೨೦ ವರ್ಷದ ಬಾಲಕನ ತಲೆಯಲ್ಲಿದ್ದ 'ಹಲವುಬಗೆಯ ಸಿದ್ಧಾಂತಗಳು', 'ವೇದಾಂತ ವಿಚಾರಗಳು' ಅವರನ್ನುದೊಡ್ಡಮಟ್ಟಕ್ಕೆಕೊಂಡೊಯ್ಯುತ್ತವೆ,ಎಂದುಅವರಕಾಲೇಜುಶಿಕ್ಷಕರುಆಗಲೇಗುರುತಿಸಿದ್ದರು.ವೆಲ್ಲೂರಿನಲ್ಲಿರುವಾಗಲೇಕೇವಲ೧೬ನೇವಯಸ್ಸಿನಲ್ಲಿಶಿವಕಾಮಮಮ್ಮಎಂಬುವವರನ್ನುಬಾಳಸಂಗಾತಿಯನ್ನಾಗಿಸಿಕೊಂಡ ರಾಧಾಕೃಷ್ಣನ್, ೧೯೦೯ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಹಾಯಕ ಉಪನ್ಯಾಸಕರಾಗಿ ಅಚ್ಚುಮೆಚ್ಚಿನ ಶಿಕ್ಷಕ ಸೇವೆಯನ್ನಾರಂಭಿಸಿದರು.
'ರಾಧಾಕೃಷ್ಣನ್ ರಜನ್ಮದಿನ ಶಿಕ್ಷಕರ ದಿನಾಚರಣೆಯ ದಿನವಾಯಿತು' 
 ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಅರ್ಥವತ್ತಾದ ಚೌಕಟ್ಟನ್ನು ನೀಡುವ ಮೂಲಕ, ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪೊತ್ತಿದ್ದಾರೆ,ಇವರು ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು. ಇವರ ಜನ್ಮದಿನವಾದ ಸೆಪ್ಟೆಂಬರ್ ೫ರಂದು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಬಿರುದುಗಳು
ಬ್ರಿಟನ್ ಆಕ್ಸ್ ಫಾರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೨ ),ಅಮೇರಿಕ ಹಾರ್ವರ್ಡ್ ವಿ.ವಿ. ಗೌರವ ಡಾಕ್ಟರೇಟ್ (೧೯೫೩ ),ಲಂಡನ್ ಪ್ರವಾಸದಲ್ಲಿದ್ದಾಗ "ಆರ್ಡರ್ ಆಫ್ ಮೆರಿನ್"ಪ್ರಶಸ್ತಿ,ವ್ಯಾಟಿಕನ್ ಸಿಟಿ ಪೋಪ್ ಜಾನ್ ರಿಂದ "ನೈಟ್ ಆಫ್ ದ ಆರ್ಮಿ. ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ -೧೯೬೮ ,ಭಾರತೀಯ ವಿದ್ಯಾಭವನ "ಬ್ರಹ್ಮ ವಿದ್ಯಾ ಭಾಸ್ಕರ "ಬಿರುದು,"ಟೆಂಪಲ್ಟನ್"ಪ್ರಶಸ್ತಿ ೧೯೭೩ರಲ್ಲಿ. 
ನಿಧನ
ತಮ್ಮ 'ರಾಷ್ಟ್ರಪತಿ ಹುದ್ದೆ'ಯ ಅಧಿಕಾರಾವಧಿ ಮುಗಿದ ನಂತರ ೧೯೬೭ ರಲ್ಲಿ ತಮ್ಮ 'ನಿವೃತ್ತಿ ಜೀವನ'ವನ್ನು ಮದ್ರಾಸಿನ 'ಮೈಲಾಪುರ'ದಲ್ಲಿರುವ ತಮ್ಮ ಅಧಿಕೃತ ನಿವಾಸ 'ಗಿರಿಜಾ'ದಲ್ಲಿ ಕಳೆದ ರಾಧಾಕೃಷ್ಣನ್, ೧೯೭೫ ರ ಏಪ್ರಿಲ್ ೧೭ ರಂದು ಇಹಲೋಕದ ಯಾತ್ರೆಯನ್ನು ಮುಗಿಸಿದರು.

No comments:

Post a Comment