welcome to lavalavika


I made this widget at MyFlashFetish.com.

Saturday, December 18, 2010

ಗೋರೂರು ರಾಮಸ್ವಾಮಿ

ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಗಾಂಧೀಜಿಯವರ ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ವಿದ್ಯಾಭ್ಯಾಸವನ್ನು ಬಿಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ೧೯೪೨ರ ಭಾರತ ಬಿಟ್ಟು ತೊಲಗಿ ('ಚಲೇಜಾವ್ ಚಳುವಳಿ'), ಸ್ವಾತಂತ್ರ್ಯಾನಂತರ ಮೈಸೂರಿನಲ್ಲಿ ಪ್ರಜಾರಾಜ್ಯ ಸ್ಥಾಪನೆಗಾಗಿ ನಡೆದ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಪಾಲ್ಗೊಂಡು ಸಕ್ರಿಯ ಪಾತ್ರ ವಹಿಸಿದ್ದರು. ರಾಜ್ಯ ವಿಧಾನಸಭಾ ಸದಸ್ಯರೂ ಆಗಿದ್ದರು.

ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ತುಮಕೂರಿನ ವಿದ್ಯಾರ್ಥಿಗಳು 1941ರಲ್ಲಿ ಸ್ಥಾಪಿಸಿಕೊಂಡಿದ್ದ ಸಂಘಟನೆ - ಸನ್ಮಿತ್ರ ಸಂಘ. 16ನೆಯ ಡಿಸೆಂಬರ್ 1945, ಭಾನುವಾರ ಸಂಜೆ ತುಮಕೂರಿನ ಕೃಷ್ಣರಾಜ ಪುರಭವನದಲ್ಲಿ ನಡೆದ ಸನ್ಮಿತ್ರ ಸಂಘದ ಸಭೆಯಲ್ಲಿ ಗೊರೂರು ಅನುಮೋದಿಸಿದ ಗೊತ್ತುವಳಿ ಇಂತಿದೆ:
ಕನ್ನಡ ನಾಡಿನ ಏಕೀಕರಣಕ್ಕೆ ಸೇರಿರುವ ಈ ಸಭೆಯು, ಸಮಸ್ತ ಕನ್ನಡಿಗರೂ ಕರ್ನಾಟಕ ಏಕೀಕರಣವು ಕಾರ್ಯಕಾರಿಯಾಗಿ ರೂಪುಗೊಳ್ಳುವಂತೆ ಪೂರ್ಣ ಪ್ರಯತ್ನ ಮಾಡಬೇಕೆಂದು ಕನ್ನಡಿಗರನ್ನು ಬೇಡುತ್ತದೆ. ಕಾಂಗ್ರೆಸ್ಸಿನಿಂದ ಅಂಗೀಕೃತವಾದ ಈ ತತ್ತ್ವವನ್ನು ಕೂಡಲೇ ಕಾರ್ಯಕಾರಿಯಾಗಿ ಮಾಡಬೇಕೆಂದು ಬ್ರಿಟಿಷ್ ಸರ್ಕಾರವನ್ನು ಒತ್ತಾಯಪಡಿಸುತ್ತದೆ.
[ಆಕರ: `ಸನ್ಮಿತ್ರ ಸಂಘ'ದ ಕಾರ್ಯಕರ್ತರಾಗಿದ್ದ ಹೆಚ್.ಆರ್.ನಾಗೇಶರಾವ್ ಅವರ ಸಂಗ್ರಹದಲ್ಲಿರುವ ದಾಖಲೆ].
ಕೃತಿಗಳು

ಕಾದಂಬರಿಗಳು

  • ಹೇಮಾವತಿ
  • ಪುನರ್ಜನ್ಮ
  • ಮೆರವಣಿಗೆ
  • ಊರ್ವಶಿ
  • ಪ್ರಬಂಧ/ಕಥಾ ಸಂಕಲನಗಳು
  • ಹಳ್ಳಿಯ ಚಿತ್ರಗಳು
  • ಗರುಡಗಂಬದ ದಾಸಯ್ಯ
  • ನಮ್ಮ ಊರಿನ ರಸಿಕರು
  • ಶಿವರಾತ್ರಿ
  • ಕಮ್ಮಾರ ವೀರಭದ್ರಾಚಾರಿ
  • ಬೆಸ್ತರ ಕರಿಯ
  • ಬೆಟ್ಟದ ಮನೆಯಲ್ಲಿ ಮತ್ತು ಇತರ ಕಥೆಗಳು
  • ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು
  • ಗೋಪುರದ ಬಾಗಿಲು
  • ಉಸುಬು
  • ವೈಯ್ಯಾರಿ
  • ಕನ್ಯಾಕುಮಾರಿ ಮತ್ತು ಇತರ ಕಥೆಗಳು


ಪ್ರವಾಸ ಕಥನ

  • ಅಮೇರಿಕಾದಲ್ಲಿ ಗೊರೂರು

ಅನುವಾದಗಳು

  • ಮಲೆನಾಡಿನವರು
  • ಭಕ್ತಿಯೋಗ
  • ಭಗವಾನ್ ಕೌಟಿಲ್ಯ

ಪ್ರಶಸ್ತಿ, ಗೌರವಗಳು

ನಿಧನ

ಗೊರೂರರು ೧೯೯೧ಸೆಪ್ಟೆಂಬರ್ ೮ರಂದು ನಿಧನರಾದರು

No comments:

Post a Comment