welcome to lavalavika


I made this widget at MyFlashFetish.com.

Friday, December 24, 2010

ಲಕ್ಷ್ಮೀಶ.


ಲಕ್ಷ್ಮೀಶನು ೧೬ನೆಯ ಶತಮಾನದಲ್ಲಿದ್ದ ಕವಿ. ಈತನ ಊರು ಚಿಕ್ಕಮಗಳೂರು ಜಿಲ್ಲೆಯದೇವನೂರು. ಅಲ್ಲಿಯ ಲಕ್ಷ್ಮೀಕಾಂತ ದೇವಾಲಯದಲ್ಲಿ ಲಕ್ಷ್ಮೀಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಜೈಮಿನಿ ಭಾರತ ಲಕ್ಷ್ಮೀಶನ ಪ್ರಸಿದ್ಧ ಕಾವ್ಯ. ಇದು ಸಂಸ್ಕೃತ ಜೈಮಿನಿ ಭಾರತದ ಕನ್ನಡ ರೂಪವಾಗಿದ್ದು ವಾರ್ಧಕ ಷಟ್ಪದಿಯಲ್ಲಿದೆ.ಈತನಿಗೆ 'ಕರ್ನಾಟಕ ಕವಿಚೈತ್ರವನ ಚೂತ'ಎಂಬ ಬಿರುದಿದ್ದಿತು.


ಕವಿಯ ಹೆಸರು: ಲಕ್ಷ್ಮೀಶ
ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ)
ಸ್ಥಳ/ಸ್ಥಳಗಳು: ಚಿಕ್ಕಮಗಳೂರು ಜಿಲ್ಲೆಯ ದೇವನೂರು. (ಗುಲ್ಬರ್ಗ ಜಿಲ್ಲೆಯ ಸುರಪುರ.
ಮತ-ಧರ್ಮ: ಬ್ರಾಹ್ಮಣ
ಆಶ್ರಯದಾತರು: ಯಾವ ರಾಜನೂ ಇಲ್ಲ
ಬಿರುದುಗಳು: ಕರ್ನಾಟ ಕವಿಚೂತವನ ಚೈತ್ರ, ಉಪಮಾಲೋಲ.
ಸಾಹಿತ್ಯಪ್ರಕಾರ: ಕಾವ್ಯ
ಛಂದೋರೂಪ: ವಾರ್ಧಕ ಷಟ್ಪದಿ.
ಹಸ್ತಪ್ರತಿಗಳು: ಓಲೆಯ ಗರಿ ಮತ್ತು ಕಾಗದ
ಪ್ರಕಟವಾದ ವರ್ಷ: 1848, (ಕಲ್ಲಚ್ಚಿನ ಪ್ರತಿ), 1875, ವ್ಯಾಖ್ಯಾನಸಹಿತವಾಗಿ (ಕಲ್ಲಚ್ಚಿನ ಪ್ರತಿ)
ಸಂಪಾದಕರು: ವೆಂಕಟ ರಂಗೋ ಕಟ್ಟಿ (1875)(ಕಲ್ಲಚ್ಚಿನ ಪ್ರತಿ), ಹೊಳಕಲ್ ಶ್ರೀನಿವಾಸ ಪಂಡಿತ, 1875, ಮುದ್ರಿತ ಪ್ರತಿ.
ಪ್ರಕಾಶಕರು: ಕೃಷ್ಣರಾಜ ಮುದ್ರಾಕ್ಷರ ಶಾಲೆ, ಮೈಸೂರು.
ನಂತರದ ಆವೃತ್ತಿಗಳು:
    ‘ಟೀಕಾ ಜೈಮಿನಿ ಭಾರತವು’ ( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), ಬಿ.ಎಂ.ಸಿದ್ದಲಿಂಗ ಶಾಸ್ತ್ರೀ, 1897, ವಾಣೀವಿಲಾಸ ಬುಕ್ ಡಿಪೋ, ಬೆಂಗಳೂರು.
     ‘ಜೈಮಿನಿ ಭಾರತ’(ಮೂರು ಸಂಪುಟಗಳಲ್ಲಿ) ( ವ್ಯಾಖ್ಯಾನ ಮತ್ತು ಸಾರಾಂಶ ಸಹಿತ), 1888, ರಾಜರಾಜೇಶ್ವರಿ ಮುದ್ರಾಕ್ಷರ ಶಾಲೆ, ಬೆಂಗಳೂರು
    ‘ಕರ್ಣಾಟಕ ಜೈಮಿನಿ ಭಾರತವು’, ಪಿ.ಆರ್. ಕರಿಬಸವ ಶಾಸ್ತ್ರೀ, 1912.
     ಪ್ರತಿಪದಾರ್ಥ ಮತ್ತು ತಾತ್ಪರ್ಯಗಳೊಂದಿಗೆ, ಸಂ. ದೊಡ್ಡಬೆಲೆ ನಾರಾಯಣಶಾಸ್ತ್ರೀ, 1912, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು
     ಸಂ. ಬಿ. ಭೀಮಸೇನರಾವ್, 1939, ಟಿ.ಎನ್. ಕೃಷ್ಣಯ್ಯಶೆಟ್ಟಿ, ಬೆಂಗಳೂರು
     ‘ಜೈಮಿನೀಭಾರತ ಸಂಗ್ರಹ’, ಸಂ. ದೇ.ಜವರೇಗೌಡ, 1959, ವಯಸ್ಕರ ಶಿಕ್ಷಣ ಸಮಿತಿ, ಮೈಸೂರು.
      ಸಂ. ಬಿ.ಎಸ್. ಸಣ್ಣಯ್ಯ ಮತ್ತು ರಾಮೇಗೌಡ, 1993, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.

No comments:

Post a Comment